ಗಗನ ತುಂಬ ಬೆಳಕು ಹರಿಸಿ,
ಕವಿದ ಕತ್ತಲ ತೀವು ಸಡಿಲಿಸಿ,
ಹರಡಿ, ಚೆಲ್ಲಿದ ಮುತ್ತು ಮಣಿಗಳ
ಮಧ್ಯೆ ರಾಜ ನಗುವ, ನೋಡೆ.
...
ಕೊನೆಯಿಲ್ಲದ ಯಾನ, ಕೊನೆ ಕಾಣದ ದಾರಿ,
ನಡೆದಷ್ಟು ಹುಟ್ಟುತ್ತಿವೆ ಹಳ್ಳ, ಕೊಳ್ಳ, ಕೇರಿ,
ನಡೆದು ಬಳಲಿದ ಕಾಲು ಕುಸಿಯುತ್ತಿದೆ ಜಾರಿ;
ಹಳೆದಾರಿ, ಹಳೆಜಾಡು, ಹಳೆಕಾಡು ನೋಡಿ
...
ಬಂದಿತದೋ ಬಂದಿತದೋ ಭಾವಭಂಗಿ ತರಂಗಿಣಿ,
ಶೂನ್ಯ ಬಗಿದು, ಗಗನ ನೆಗೆದು, ಬಂತು ಭಾವವಾಹಿನಿ,
ದಿಕ್ಕುದಿಕ್ಕಿನಿಂದ ಉಕ್ಕಿ, ಗಾಳಿುಂದ ಬಿರುಸು ಹೆಕ್ಕಿ,
ಬಂದಿತದೋ ಬಂದಿತದೋ ಭಾವಭಂಗಿ ತರಂಗಿಣಿ.
...
ಇದೇನಿದು ನಿದ್ರಾಮುದ್ರ,
ನಿರ್ಜೀವತೆಯ ಸಾರಸಮುದ್ರ,
ಅಲೆಸೆಲೆಯಲ್ಲಿ ಮಂಕುಬಲೆ ಚೆಲ್ಲಿ
ಚೈತನ್ಯ ಹಿಂಡುತ್ತದೆ ಕತ್ತಲೆಯ ಬಳ್ಳಿ;
...
ಸಂವೇದನೆಯೊಂದು ಪರಕಾಯ ಪ್ರವೇಶದ ದಾರಿ,
ನಾನು ನನ್ನದರಿಂದ ಹೊರಗೆಳೆವ ಸಂಮೋಹನಾಸ್ತ್ರ;
ಸಂವೇದನೆಯು ಜೀವಜೀವವನೊಂದಾಗಿಸುವ ಗಂಟು,
ರಸ ಜೀವನಕೆ ಸ್ಪಂದಿಸುವ ಸುಖದಾಂತರ್ಯದ ಗುಟ್ಟು;
...
ಜೀವನ ವಿಷ್ಟಪ ವಿಕಸನ ಸಾಧನ,
ವಿಶ್ವವ್ಯವಸ್ಥೆಯ ಚಲನೆಯ ಚೇತನ,
ಊಧ್ರ್ವವಿಸ್ಫೋಟದ ಪ್ರಕೃತಿ ಹಂದರ
ವಿಕಸನಯಾನದ ಅಮೂರ್ತ ಯಂತ್ರ,
...
ಬದುಕಿದೆನು ಬದುಕಿದೆನು
ಭವ ಭಯದ ಬಿಗಿುಂದ;
ನಗುನಗುತ ಮಗುವಾಗಿ
ಹೂವಾಗಿ ಅರಳುವೆನು;
...
ನಾನೆಲ್ಲಿದ್ದೇನೆಂದು ನನಗೇ ಗೊತ್ತಿಲ್ಲ,
ನಾನಿಲ್ಲಿದ್ದೇನೆಂದು ಮಾತ್ರ ಗೊತ್ತು;
ಸ್ಥಳದ ಹಿಂದುಮುಂದುಗಳು ಗೊತ್ತಲ್ಲ,
ನಿಂತ ನಾಲ್ಕಡಿ ನೆಲ ಮಾತ್ರ ಗೊತ್ತು.
...
ನಿನ್ನಲ್ಲಿದ್ದು ನಿನ್ನಿಂದಲಿದ್ದು
ನಿನ್ನನ್ನು ಹುಡುಕುವೆವು ನಾವು;
ನೀನು ಕೊಟ್ಟಿರುವ ಕಣ್ಣುಗಳಲ್ಲೆ
ಮೂಡಿ ನೀ ಬರಲಾರೆ ಯಾಕೆ?
...
ಪೂಜ್ಯರಲಿ ಪೂಜ್ಯ ರಾಘವೇಂದ್ರ ಗುರುರಾಜ,
ದಯೆಧರ್ಮದಧೀಕ್ಷ, ವಿಶ್ವದರ್ಶನ ತೇಜ,
ನಿನ್ನ ಪಾದದ ಬಳಿಗೆ ಬಯಸಿ ಬಂದಿಹ ನಮಗೆ
ಆಶ್ರಯವ ಕೊಡುಸ್ವಾಮಿ, ಕೈಹಿಡಿದು ನಡೆಸು.
...