PRAVEEN KUMAR Kannada Poems

PRAVEEN KUMAR Kannada Poems Poems

ಗಗನ ತುಂಬ ಬೆಳಕು ಹರಿಸಿ,
ಕವಿದ ಕತ್ತಲ ತೀವು ಸಡಿಲಿಸಿ,
ಹರಡಿ, ಚೆಲ್ಲಿದ ಮುತ್ತು ಮಣಿಗಳ
ಮಧ್ಯೆ ರಾಜ ನಗುವ, ನೋಡೆ.
...

ಕೊನೆಯಿಲ್ಲದ ಯಾನ, ಕೊನೆ ಕಾಣದ ದಾರಿ,
ನಡೆದಷ್ಟು ಹುಟ್ಟುತ್ತಿವೆ ಹಳ್ಳ, ಕೊಳ್ಳ, ಕೇರಿ,
ನಡೆದು ಬಳಲಿದ ಕಾಲು ಕುಸಿಯುತ್ತಿದೆ ಜಾರಿ;
ಹಳೆದಾರಿ, ಹಳೆಜಾಡು, ಹಳೆಕಾಡು ನೋಡಿ
...

ಬಂದಿತದೋ ಬಂದಿತದೋ ಭಾವಭಂಗಿ ತರಂಗಿಣಿ,
ಶೂನ್ಯ ಬಗಿದು, ಗಗನ ನೆಗೆದು, ಬಂತು ಭಾವವಾಹಿನಿ,
ದಿಕ್ಕುದಿಕ್ಕಿನಿಂದ ಉಕ್ಕಿ, ಗಾಳಿುಂದ ಬಿರುಸು ಹೆಕ್ಕಿ,
ಬಂದಿತದೋ ಬಂದಿತದೋ ಭಾವಭಂಗಿ ತರಂಗಿಣಿ.
...

ಇದೇನಿದು ನಿದ್ರಾಮುದ್ರ,
ನಿರ್ಜೀವತೆಯ ಸಾರಸಮುದ್ರ,
ಅಲೆಸೆಲೆಯಲ್ಲಿ ಮಂಕುಬಲೆ ಚೆಲ್ಲಿ
ಚೈತನ್ಯ ಹಿಂಡುತ್ತದೆ ಕತ್ತಲೆಯ ಬಳ್ಳಿ;
...

ಸಂವೇದನೆಯೊಂದು ಪರಕಾಯ ಪ್ರವೇಶದ ದಾರಿ,
ನಾನು ನನ್ನದರಿಂದ ಹೊರಗೆಳೆವ ಸಂಮೋಹನಾಸ್ತ್ರ;
ಸಂವೇದನೆಯು ಜೀವಜೀವವನೊಂದಾಗಿಸುವ ಗಂಟು,
ರಸ ಜೀವನಕೆ ಸ್ಪಂದಿಸುವ ಸುಖದಾಂತರ್ಯದ ಗುಟ್ಟು;
...

ಜೀವನ ವಿಷ್ಟಪ ವಿಕಸನ ಸಾಧನ,
ವಿಶ್ವವ್ಯವಸ್ಥೆಯ ಚಲನೆಯ ಚೇತನ,
ಊಧ್ರ್ವವಿಸ್ಫೋಟದ ಪ್ರಕೃತಿ ಹಂದರ
ವಿಕಸನಯಾನದ ಅಮೂರ್ತ ಯಂತ್ರ,
...

ಬದುಕಿದೆನು ಬದುಕಿದೆನು
ಭವ ಭಯದ ಬಿಗಿುಂದ;
ನಗುನಗುತ ಮಗುವಾಗಿ
ಹೂವಾಗಿ ಅರಳುವೆನು;
...

ನಾನೆಲ್ಲಿದ್ದೇನೆಂದು ನನಗೇ ಗೊತ್ತಿಲ್ಲ,
ನಾನಿಲ್ಲಿದ್ದೇನೆಂದು ಮಾತ್ರ ಗೊತ್ತು;
ಸ್ಥಳದ ಹಿಂದುಮುಂದುಗಳು ಗೊತ್ತಲ್ಲ,
ನಿಂತ ನಾಲ್ಕಡಿ ನೆಲ ಮಾತ್ರ ಗೊತ್ತು.
...

ನಿನ್ನಲ್ಲಿದ್ದು ನಿನ್ನಿಂದಲಿದ್ದು
ನಿನ್ನನ್ನು ಹುಡುಕುವೆವು ನಾವು;
ನೀನು ಕೊಟ್ಟಿರುವ ಕಣ್ಣುಗಳಲ್ಲೆ
ಮೂಡಿ ನೀ ಬರಲಾರೆ ಯಾಕೆ?
...

ಪೂಜ್ಯರಲಿ ಪೂಜ್ಯ ರಾಘವೇಂದ್ರ ಗುರುರಾಜ,
ದಯೆಧರ್ಮದಧೀಕ್ಷ, ವಿಶ್ವದರ್ಶನ ತೇಜ,
ನಿನ್ನ ಪಾದದ ಬಳಿಗೆ ಬಯಸಿ ಬಂದಿಹ ನಮಗೆ
ಆಶ್ರಯವ ಕೊಡುಸ್ವಾಮಿ, ಕೈಹಿಡಿದು ನಡೆಸು.
...

ಸುಳಿದು ಹಾರಿದ ಮಿಂಚಿನ ಬಳ್ಳಿ
ಕೊಟ್ಟಿತು ಗಗನಕೆ ಬೆಳಕಿನ ಕೊಳ್ಳಿ,
ಕತ್ತಲು ಕರಗಿ ಹೊಳಪಿನ ಹೊನಲು
ಚೆಲ್ಲಿತು ತುಂಬ ಆಶೆಯ ಬಿಸಿಲು.
...

ಮೃದು ಮಧು, ಮಧುರ,
ಹೀರಲು ದುಂಬಿಗೆ ತುಂಬಿದ ಕಾತುರ
ಹೂವನು ಅರಸುತ, ಹೂವಿಗೆ ಹಾರುತ;
ಹೂ ಸಂಕುಲದ ಮೈಮೇಲಡರಿದೆ;
...

ಮೂರ್ಖರಿವರು, ಮನುಷ್ಯರು,
ತಮ್ಮತನ ತಾವರಿಯರು.

ಚಿನ್ನ ತಾಮ್ರ ಅಡಗಿಕೊಂಡ
...

ಕೇಳುತ್ತಿದೆಯೆ ಭಾಜಬಜಂತ್ರಿ?
ಬರುತ್ತಿದ್ದಾನೆ ಮಹಾಮಂತ್ರಿ,
ಖಾದಿ, ಕಾಕಿ, ಕಾವಿ ಕೋವಿದರ ಹಿಂಡು
ಸುತ್ತುತ್ತಿವೆ, ಹಿಂದುಮುಂದು ಹಿಂಡು ಹಿಂಡು.
...

ಬೆಟ್ಟ, ಕಂದರ, ಬಯಲು, ಸೀಮೆ, ನದಿ, ಕಾಡು
ತೋಳಸೆರೆಯಲ್ಲಿ ಕಡಲು ಸೆರಗು ಚಿಮ್ಮುತ್ತಿದೆ ನೋಡು,
ಮರಾಠ, ದ್ರಾವಿಡ ಗೌರವ ಪಹರೆ ಸ್ನೇಹದ ಹಾಡು
ಮಣ್ಣಲ್ಲಿ ಮಣ್ಣಾಗಿ ಕೂಡಿ ಕಟ್ಟಿದೆ ಕನ್ನಡದ ನಾಡು.
...

ಗಾಳಿಯಲ್ಲಾಡುವ ಮೋಡದ ಗೂಡು
ಕಪ್ಪಿನ ಸಿಡುಕಿನ ಉಡುಗೆಯ ತೊಟ್ಟು,
ಹರ್ಷದ ಮಳೆಹನಿ ಧಾರೆಯ ನೀಡು.
...

ಕೋಪಧಗೆಯಲಿ ಬೆಂದು ಶುದ್ಧರಾದವರಿಲ್ಲ,
ಕೆಂಪು ಕಣ್ಣಿನ ಸೋಂಕು ಕೈವಲ್ಯಸುಖ ತಂದಿಲ್ಲ,
ಶಿವತಾಂಡವ ನೋಡಿ ನಿರ್ಮಲ ಶಾಂತಿ ಕಂಡವರಿಲ್ಲ;
ಕೋಪ ಕೆದರಿದ ಮೇಲೆ ನ್ಯಾಯನ್ಯಾಯ ಕಾಣುವುದಿಲ್ಲ,
...

ಕುದುರೆಯನೇರಿ
ಕಡಿವಾಣ ಕಡೆಗೆಣಿಸಿದರೆ ಹೇಗೆ?
ಸಾಗರವ ಸೇರಿ
ಜಂಘಬಲ ಜಡತವಾದರೆ ಹೇಗೆ?
...

ಮಾತು ಮುತ್ತು ಚೆಲ್ಲಿ
ಹುಳುಕಿನ ಹುತ್ತಕ್ಕೆ ಹಾಲೆರೆಯ ಬೇಡ,
ಜ್ಞಾನ ದ್ಟೃ, ಶ್ರವಣ, ಗ್ರಹಣ ಬುದ್ಧಿ ಹುರಿಗೊಂಡು
ಬೆಳಕಿನನಲಿ ನಡೆಯುವುದೆ ಜೀವನದ ಶುದ್ಧಿ;
...

ಸ್ನೇಹವು ಬಲೆಯಲ್ಲ, ಗೆಳೆಯ,
ಮೇಲೇರಲಿರುವ ನೂಲಿನ ಏಣಿ;
ಸ್ನೇಹವು ಬಂಧನದ ಪಂಜರವಲ್ಲ,
ಗಗನ ವಿಹಾರದ ವಿಹಂಗಮ ಕರಣ.
...

PRAVEEN KUMAR Kannada Poems Biography

PRAVEEN KUMAR with his more than three decades of government service at senior levels and as a poet of seventeen published collections and as an author of six volumes on matters of governance and administration is a familiar face in Indian intellectual circuits. His more than 30 contributions on governance and administration to prominent national dailies like The Hindu, Indian Express, Deccan Herald and Times of India and other periodicals and journals were extremely popular and often sensational by their innovative unorthodox thoughts. He retired from Government Service as a Senior Police Officer after 31 years of service that covered assignments as Director of Food and Civil Supplies Enforcement, Deputy Commissioner of Bangalore City, State Intelligence in charge of Foreigners, Coastal Security Police and various assignments in CID inter alia. Born in Mangalore as the eldest son of Shree R.D.Suvarna and Smt. B.Sarojini, Praveen Kumar graduated in Science from St. Aloysius College, Mangalore, going on to obtain post-graduate degree in Literature from Mysore University. He also holds post-graduate diploma in Business Management as well as Higher Diploma in Cooperative Management. He also attended six advanced courses at the National Police Academy, Hyderabad. His Poem, 'Justice' figures in Karnataka IX Standard Second Language English Text Book from the 2013-14 Academic Year.)

The Best Poem Of PRAVEEN KUMAR Kannada Poems

ಚಂದ್ರ

ಗಗನ ತುಂಬ ಬೆಳಕು ಹರಿಸಿ,
ಕವಿದ ಕತ್ತಲ ತೀವು ಸಡಿಲಿಸಿ,
ಹರಡಿ, ಚೆಲ್ಲಿದ ಮುತ್ತು ಮಣಿಗಳ
ಮಧ್ಯೆ ರಾಜ ನಗುವ, ನೋಡೆ.

ರೆಪ್ಪೆ ಕಚ್ಚಿದ, ಮುತ್ತು ತುಂಬಿದ
ನಿದ್ರೆಯೊಳಗಿನ ಸ್ವಪ್ನದಂತೆ,
ವಿಶ್ವದರ್ಶನ ಕಂಡಿಯಂತೆ,
ಶುಭ್ರ ಚಂದಿರ ನಗುವ, ನೋಡೆ.

ಬಳಲಿ ಬಾಡಿದ ಜೀವರಾಶಿಯ
ಸತ್ಯಮೀರಿದ ಲೋಕಕೇರಿಸಿ,
ಶಾಂತಿ ತೃಪ್ತಪಥದಲ್ಲಿರಿಸಿ,
ಮುಗಿಲು ತುಂಬ ತುಂಬಿ ಯೌವನ
ಚಂದ ಚಂದಿರ ಪಹರೆ ನಿಲ್ಲುವ.

PRAVEEN KUMAR Kannada Poems Comments

Close
Error Success